Kishore Kumar Hits

Vidhya - Anjumalle Malle текст песни

Исполнитель: Vidhya

альбом: Usiriginta Neene Attira


ಅಂಜುಮಲ್ಲೇ ಮಲ್ಲೇ ಅಳಬಾರದು
ಕಣ್ಣನೀರು ಏಕೆ ಏಕೆ?
ಅಂತರಂಗ ತೆರೆದು ಕಾಪಾಡುವೆ
ನಿನ್ನ ನೋವು ನನದು ನನದು
ಕನಸಲ್ಲೂ ಕಣ್ಣೀರು ಬರಬಾರದು
ಕನಸಲ್ಲೂ ಕಣ್ಣೀರು ಬರಬಾರದು
ಅಂಜುಮಲ್ಲೇ ಮಲ್ಲೇ ಅಳಬಾರದು
ಕಣ್ಣನೀರು ಏಕೆ ಏಕೆ?

ಮರೆತು ಬಿಡು ನಿನ್ನೆಗಳ
ನಿನ್ನ ನಾಳೆ ಮುಂದಿವೆ
ದೂರಾಯಿಡು ನೋವುಗಳ
ನಿನಗೂ ಇದೆ ಸ್ವರ್ಗವು
ಭಯವೇಕೆ ಇನ್ನು ನಾನಿಲ್ಲವೇನು
ನಿನ್ನ ಕನಸಿಗೆ ಕಾವಲು ನಾನು
ಕಣ್ಣರೆಪ್ಪೆ ತುಂಬ ಕನಸಿದ್ದರೂ
ಕಣ್ಣನೀರು ಏಕೆ ಏಕೆ?
ನಿನ್ನ ನೆರಳ ಹಾಗೆ ನಾನಿದ್ದರೂ
ಬಿಡದ ಚಿಂತೆ ಏಕೆ ಏಕೆ?
ನಿನ್ನ ಎಲ್ಲಾ ಸುಖ ದುಃಖ ನನದಲ್ಲವೇ
ಅಂಜುಮಲ್ಲೇ ಮಲ್ಲೇ ಅಳಬಾರದು
ಕಣ್ಣನೀರು ಏಕೆ ಏಕೆ?

ಮೈಯೆಲ್ಲವೂ ಮುಳ್ಳಿದ್ದರೂ ನಾಗಲಾರವೇ ಹೂಗಳು
ನಿನ್ನ ಕಂಬನಿಗೆ ನನ್ನ ಕೈ ಇದೆ ಚಿಂತೆ ಬಿಡು ಬಳಲಿ
ಸೋಲೆಂಬ ಮಾತೆ ಬರಬಾರದಿಲ್ಲಿ
ಸೋಲನ್ನೇ ಸೋಲಿಸು ನೀನು
ಇನ್ನು ಎಂದೂ ಎಂದೂ ಎಂದೆಂದಿಗೂ
ನಿನ್ನ ನೋವು ನನದು ನನದು
ಒಂದೇ ಒಂದು ಕ್ಷಣವು ನೀ ಅತ್ತರು
ನನ್ನ ಜೀವ ಇರದು ಇರದು
ನನ್ನ ನೆರಳೇ ನಿನ್ನ ಹೆಜ್ಜೆ ಗುರುತಾಗಲಿ
ನನ್ನ ನೆರಳೇ ನಿನ್ನ ಹೆಜ್ಜೆ ಗುರುತಾಗಲಿ
ಅಂಜುಮಲ್ಲೇ ಮಲ್ಲೇ ಅಳಬಾರದು
ಕಣ್ಣನೀರು ಏಕೆ ಏಕೆ?

Поcмотреть все песни артиста

Другие альбомы исполнителя

Похожие исполнители

Jeeva

Исполнитель