ದೀಪವೇ ನಿನ್ನಾ ಕಣ್ಣು ಅಪರೂಪವೇ ಇಂಥಾ ಹೆಣ್ಣು ನನ ಬಾಳದಾರಿಗೆ ಜೊತೆಯಾದೆ ನೀ ಮರುಜನ್ಮದಲ್ಲಿಯೂ ಸಖಿಯಾಗು ನೀ ಪ್ರೀತಿಗೆ ಸಮ್ಮತಿ ಹೇಳಿದಾ ಶ್ರೀಮತಿ ಹೇಳಲೇ ಯಾರಿಗೂ ಹೇಳದಾ ಸಂಗತಿ ನಿನ್ನ ಬಿಟ್ಟು ನನ್ನ ಜೀವನಾ ಕಂಪು ಇರದ ಖಾಲಿ ಚಂದನ ದೀಪವೇ ನಿನ್ನಾ ಕಣ್ಣು ಅಪರೂಪವೇ ಇಂಥಾ ಹೆಣ್ಣು ♪ ವಿವರಣೆಗೆ ಸಿಗದ ಧ್ಯಾನ ವಿನಿಮಯವೂ ಮಾತು ಮೌನ ಅನುರಾಗ ಎಂಬಾ ಮಾಯದ ಚೇತನ ಇರುವಾಗ ಸಾಂಗತ್ಯ ಸೊಗಸಂತೆ ದಾಂಪತ್ಯ ಸೇರಲೇನು ಮೂರು ಗಂಟು ಹಾಲಧಾರೆ ಶಾಸ್ತ್ರವು ಎರಡು ಜೀವ ಹಾಯಾಗಿ ಹರಟೆ ಹೊಡೆಯೋದು ಇವರ ಕೆಲಸ ಹೀಗೇನೆ ಪ್ರೀತಿ ಮಾಡೋದು ದೀಪವೇ ನಿನ್ನಾ ಕಣ್ಣು ನನಗಾಗಿಯೇ ಬಂದಾ ಹೆಣ್ಣು ♪ ಕನಸುಗಳ ಮಳಿಗೆಯ ತೆರೆದೆ ನಿನಗೆಲ್ಲವೂ ಉಚಿತಾ ಎಂದೆ ಪಡೆದಂಥ ನಾನೆ ಧನ್ಯನು, ಮಾನ್ಯನು ಅಭಿಮಾನಿ ನಾ ನಿನಗೆ ಬಹುಮಾನ ನೀ ನನಗೆ ಜೀವ ಹೋದ ಮೇಲು ನಮ್ಮ ಪ್ರೀತಿಯೊಂದೇ ಶಾಶ್ವತ ರುಜುವಾತು ಬೇರೆಬೇಕೆ ಪ್ರೀತಿ ಹೇಳೋಕೆ ಲೋಕಕೆಲ್ಲ ನಾವೇ ಸಾಕು ಪ್ರೀತಿ ಹಂಚೋಕೆ ದೀಪವೇ ನಿನ್ನಾ ಕಣ್ಣು ಅಪರೂಪವೇ ಇಂಥಾ ಹೆಣ್ಣು