ಹೃದಯಕಮಲದೊಳಗೊಂದು ಮರಿದುಂಬಿ ಹುಟ್ಟಿತ್ತು: ಹಾರಿ ಹೋಗಿ ಆಕಾಶವ ನುಂಗಿತ್ತಯ್ಯಾ. ಆ ತುಂಬಿಯ ಗರಿಯ ಗಾಳಿಯಲ್ಲಿ ಮೂರು ಲೋಕವೆಲ್ಲವು ತಲೆಕೆಳಗಾಯಿತ್ತು. ಪಂಚವರ್ಣದ ಹಂಸೆಯ ಪಂಜರವ ಖಂಡಿಸಿದಡೆ ಗರಿ ಮುರಿದು ತುಂಬಿ ನೆಲಕ್ಕುರುಳಿತ್ತು. ನಿಜದುದಯದ ಬೇಡಗಿನ ಕೀಲ, ಗುಹೇಶ್ವರಾ, ನಿಮ್ಮ ಶರಣರ ಅನುಭಾವಸಂಗದಲ್ಲಿರ್ದು ಕಂಡೆನಯ್ಯಾ. ಹೃದಯಕಮಲದೊಳಗೊಂದು ಮರಿದುಂಬಿ ಹುಟ್ಟಿತ್ತು: ಹಾರಿ ಹೋಗಿ ಆಕಾಶವ ನುಂಗಿತ್ತಯ್ಯಾ. ಆ ತುಂಬಿಯ ಗರಿಯ ಗಾಳಿಯಲ್ಲಿ ಮೂರು ಲೋಕವೆಲ್ಲವು ತಲೆಕೆಳಗಾಯಿತ್ತು. ಪಂಚವರ್ಣದ ಹಂಸೆಯ ಪಂಜರವ ಖಂಡಿಸಿದಡೆ ಗರಿ ಮುರಿದು ತುಂಬಿ ನೆಲಕ್ಕುರುಳಿತ್ತು. ನಿಜದುದಯದ ಬೇಡಗಿನ ಕೀಲ, ಗುಹೇಶ್ವರಾ, ನಿಮ್ಮ ಶರಣರ ಅನುಭಾವಸಂಗದಲ್ಲಿರ್ದು ಕಂಡೆನಯ್ಯಾ.