ಬಂದ ಬಟ್ಟೆಯ ನಿಂದು ನೋಡದೆ ಬಂದ ಬಟ್ಟೆಯ ಕಂಡು ಸುಖಿಯಾದೆ. ನಿಂದ ನಿಲವು ಮುಂದುಗೆಡಿಸಿ ನಿಂದ ನಿಲವ ಮುಂದುಗೊಂಡಿತ್ತು. ತಂದೆ-ಮಕ್ಕಳ ಗುಣ ಒಂದೆ ಭಾವದಲಡಗಿ ಸಂದಿಲ್ಲದ ಕಾಲೊಳಗೆ ಕೈಮೂಡಿತ್ತು. ಒಂದನೆ ಹಿಡಿದು ಒಂದನೆ ಬಿಟ್ಟಡೆ ಇಂದು ನಮ್ಮ ಗುಹೇಶ್ವರನ ಸದ್ಭಕ್ತಿಯಾಯಿತ್ತೈ ಸಂಗನ ಬಸವಣ್ಣಾ. ಬಂದ ಬಟ್ಟೆಯ ನಿಂದು ನೋಡದೆ ಬಂದ ಬಟ್ಟೆಯ ಕಂಡು ಸುಖಿಯಾದೆ. ನಿಂದ ನಿಲವು ಮುಂದುಗೆಡಿಸಿ ನಿಂದ ನಿಲವ ಮುಂದುಗೊಂಡಿತ್ತು. ತಂದೆ-ಮಕ್ಕಳ ಗುಣ ಒಂದೆ ಭಾವದಲಡಗಿ ಸಂದಿಲ್ಲದ ಕಾಲೊಳಗೆ ಕೈಮೂಡಿತ್ತು. ಒಂದನೆ ಹಿಡಿದು ಒಂದನೆ ಬಿಟ್ಟಡೆ ಇಂದು ನಮ್ಮ ಗುಹೇಶ್ವರನ ಸದ್ಭಕ್ತಿಯಾಯಿತ್ತೈ ಸಂಗನ ಬಸವಣ್ಣಾ.