ಆ... ಹಾ... ಆ... ಹಾ... ರಣ ರಣ ರಣ ರಣ ರಾಕ್ಷಸರ ರಾಜಾ ಅಸುರ ಕುಲ ಚಕ್ರಾಧಿಪತೇ... ವೀರ ಶೂರ ಧೀರಾ ರಣ ರಣ ಲಂಕಾಧಿಪತೇ... ರಾವಣಾ... ರಾವಣಾ... ರಾವಣ ಕೈಯ್ಯಲ್ಲಿ ಬಿಲ್ಲಿನ ಕೋಲು ಮೈಯ್ಯಲ್ಲಾ ಧರ್ಮದ ಶಾಲು ಧರ್ಮಾನೇ ದೇವರೂ ಅಂದನೊ ನನ್ನ ಆ ಶ್ರೀರಾಮಚಂದ್ರನೂ ಯಾರನ್ನು ನೋಯಿಸದವನು ಸತ್ಯಕ್ಕೆ ತಲೆಬಾಗುವನು ಮಾತಿಗೆ ತಪ್ಪದಾ ಮಗನೊ ನನ್ನ ಆ ಶ್ರೀರಾಮಚಂದ್ರನೂ ಅಷ್ಟ ದಿಕ್ಕುಗಳು ಕಾಲ ಕೆಳಗೆ ಎಲ್ಲಾ ದೇವರೀ ಮುಷ್ಟಿಯೊಳಗೆ ಸೋಲಿಲ್ಲ ನನಗೆ ಸಾವಿಲ್ಲ ಕೊನೆಗೆ ನಾ ಯಾರು ಗೊತ್ತ ನಿನಗೇ. ರಾವಣ... ತಂದೆಗೆ ಮಾತು ಕೊಟ್ಟ ರಾಜ್ಯವ ತ್ಯಜಿಸೀ ಬಿಟ್ಟ ಆ ತಾಯಿ ಕೌಸಲ್ಯೆಯ ಮಗನೂ ನನ್ನ ಆ ಶ್ರೀರಾಮಚಂದ್ರನೂ ವಾನರ ಸೇನೆ ಕಟ್ಟಿ ಲಂಕೆಗೆ ಬೆಂಕೀ ಇಟ್ಟ ಸೀತೆಯ ಮರಳೀ ತಂದನೂ ನನ್ನ ಆ ಶ್ರೀರಾಮಚಂದ್ರನೂ ಧಗ ಧಗ ಧಗ ಧಗ ಧಗ ಧಗ ಧಗ ಧಗ ಉರಿಯುತಿದೆ ಎದೆ ಉರಿಯುತಿದೆ ರಣ ರಣ ರಣ ರಣ ರಣ ರಣ ರಕ್ತವು ಕುದಿಯುತಿದೆ ಕುದಿಯುತಿದೆ ರಾಮನ ಎದೆಯನು ಬಗೆಯುವ ಆಸೆ ನಂದೇ ರಕ್ತವ ತೆಗೆದು ಪಾದವ ತೊಳೆಯುವೇ ಇಂದೇ ರಾವಣಾ... ಣಾ... ಣಾ...