ಜಯ ಕರ್ನಾಟಕ ಜಯ ಕರ್ನಾಟಕ ಜಯ ಕರ್ನಾಟಕ ಮಾತೆ ಜಯಗೀತೆ ಹಾಡಿ ಸುತರೆಲ್ಲ ಕೂಡಿ ವಂದಿಪೆವು ಜನ್ಮದಾತೆ ವಂದಿಪೆವು ಜನ್ಮದಾತೆ ಜಯ ಕರ್ನಾಟಕ ಜಯ ಕರ್ನಾಟಕ ಜಯ ಕರ್ನಾಟಕ ಮಾತೆ ಜಯಗೀತೆ ಹಾಡಿ ಸುತರೆಲ್ಲ ಕೂಡಿ ವಂದಿಪೆವು ಜನ್ಮದಾತೆ ವಂದಿಪೆವು ಜನ್ಮದಾತೆ ಜಯ ಕರ್ನಾಟಕ ಜಯ ಕರ್ನಾಟಕ ಜಯ ಕರ್ನಾಟಕ ಮಾತೆ ಕೋಲಾರ ಚಿನ್ನ ಬೇಲೂರು ಚೆನ್ನ ಮೈಸೂರು ಗಂಧ ತಂದ ಸಾಹಿತ್ಯ ಕಲೆಯ ಸಂಸ್ಕೃತಿಯ ನೆಲೆಯ ಆಗರವು ನಮ್ಮ ನೆಲವೂ ಸ್ವಾತಂತ್ರಕ್ಕಾಗಿ ಹೋರಾಡಿ ಮಡಿದ ಕಿತ್ತೂರು ವೀರ ರಾಣಿ ಕೆಚ್ಚೆದೆಯ ಕಲಿಯ ಮೈಸೂರು ಹುಲಿಯ ಹೆಮ್ಮೆಯದು ಎಂಬ ಕುಲವು ಹೆಮ್ಮೆಯದು ಎಂಬ ಕುಲವು ಜಯ ಕರ್ನಾಟಕ ಜಯ ಕರ್ನಾಟಕ ಜಯ ಕರ್ನಾಟಕ ಮಾತೆ ಲಕ್ಷ್ಮೀಶ ರನ್ನ ನಾಣಪ್ಪ ಜನ್ನ ಮುದ್ದಣ್ಣ ಹರಿಹರ ಪಂಪ ಹಿರಿ ಕವಿಗಳಿಂದ ವರ ಪಡೆದು ಬಂದ ಕನ್ನಡವು ನಮ್ಮ ನುಡಿಯೂ ಶೃಂಗೇರಿ ಉಡುಪಿ ಗೋಕರ್ಣ ಕ್ಷೇತ್ರ ಕೊಲ್ಲೂರು ಧರ್ಮಸ್ಥಳವೂ ನೂರಾರು ಜನರ ಕರಬೀಸಿ ಕರೆವ ದೇಗುಲವು ಎಮ್ಮ ಗುಡಿಯೂ ದೇಗುಲವು ಎಮ್ಮ ಗುಡಿಯೂ ಜಯ ಕರ್ನಾಟಕ ಜಯ ಕರ್ನಾಟಕ ಜಯ ಕರ್ನಾಟಕ ಮಾತೆ ಆಗುಂಬೆ ಘಾಟಿಗೆ ಇನ್ನಿಲ್ಲ ಸಾಟಿ ಭಾಸ್ಕರನು ಪಡುವಣಿಂದ ಹೊಂಬಣ್ಣ ತಳೆದು ಬಾನಂಚಲ್ಲಿಳಿದು ಅಸ್ತಮಿಪ ದೃಶ್ಯ ಚಂದ ಉತ್ತರದ ಸೀಮೆ ಅಂಗನೆಯಾ ಭೀಮೆ ದಕ್ಷಿಣದ ನಾರಿ ಕಾವೇರಿ ಸುರಗಂಗೆ ತಂಗಿ ಯಂತಿರ್ಪ ತುಂಗೆ ಒಳನಾಡ ಮಂಗಳಾಂಗಿ ಒಳನಾಡ ಮಂಗಳಾಂಗಿ ಜಯ ಕರ್ನಾಟಕ ಜಯ ಕರ್ನಾಟಕ ಜಯ ಕರ್ನಾಟಕ ಮಾತೆ ಕೇರಳದ ಚಿನ್ನ ನೆರೆ ಆಂಧ್ರದಣ್ಣ ತಮಿಳ್ನಾಡು ನಮ್ಮ ತಮ್ಮ ಉತ್ತರದ ಮಿತ್ರ ಭಾರತದ ಪುತ್ರ ಉತ್ತರದ ಮಿತ್ರ ಭಾರತದ ಪುತ್ರ ಎಂದೆಣಿಪ ಬೆಂಗಳೂರು ಏಲಕ್ಕಿ ಇಂಗು ಗೋಡಂಬಿ ತೆಂಗು ಕರಿ ಮೆಣಸು ಜಾಯಿಕಾಯಿ ಹೋರನಾಡುಗಳಿಗೆ ಹಡಗಲ್ಲಿ ಕಳಿಪ ಬಂದರವು ಮಂಗಳೂರು ಮಂಗ್ಳುರೇ ಚೆಂದ ಬೆಂಗ್ಳೂರೇ ಅಂದ ಮೈಸೂರು ಬೃಂದಾವನ ಮಂಗ್ಳುರೇ ಚೆಂದ ಬೆಂಗ್ಳೂರೇ ಅಂದ ಮೈಸೂರು ಬೃಂದಾವನ ಧಾರವಾಡ ಮಂಡ್ಯ ಶಿವಮೊಗ್ಗ ದುರ್ಗ ಧಾರವಾಡ ಮಂಡ್ಯ ಶಿವಮೊಗ್ಗ ದುರ್ಗ ಗುಲ್ಬರ್ಗ ರಾಯಚೂರು ಬಳ್ಳಾರಿ ಸೇರಿ ಉಳಿದೆಲ್ಲ ಜಿಲ್ಲೆ ಒಂದೊಂದು ಮುತ್ತಿನಂತೆ ಹತ್ತಕ್ಕೆ ಮತ್ತೆ ಒಂಬತ್ತು ಸೇರಿ ಈ ನಾಡು ಜೆನಿಸಿತಂತೆ ಈ ನಾಡು ಜೆನಿಸಿತಂತೆ ಜಯ ಕರ್ನಾಟಕ ಜಯ ಕರ್ನಾಟಕ ಜಯ ಕರ್ನಾಟಕ ಮಾತೆ ಜಯಗೀತೆ ಹಾಡಿ ಸುತರೆಲ್ಲ ಕೂಡಿ ವಂದಿಪೆವು ಜನ್ಮದಾತೆ ವಂದಿಪೆವು ಜನ್ಮದಾತೆ ವಂದಿಪೆವು ಜನ್ಮದಾತೆ ವಂದಿಪೆವು ಜನ್ಮದಾತೆ ವಂದಿಪೆವು ಜನ್ಮದಾತೆ ವಂದಿಪೆವು ಜನ್ಮದಾತೆ