Kiran Ravindranath - Kannerali текст песни
Исполнитель:
Kiran Ravindranath
альбом: Raju Kannada Medium (Original Motion Picture Soundtrack)
ಕಣ್ಣೀರಲಿ ಕಾಡಿಗೆ ಕರಗಿ
ಅಂಗೈ ಮದರಂಗಿ ಒಣಗಿ
ಕಾದಿಹೆ ನಿನಗಾಗಿ ಬರುವೆಯಾ
ಬೆರಳಿಗೆ ಬೆರಳನ್ನು ಬೆಸೆವ
ಏಳು ಹೆಜ್ಜೆಗಳ ತುಳಿವ
ಕಂಡ ಕನಸೆಲ್ಲ ಮರೆತೆಯಾ
ನೋವುಗಳ ಸುಳಿಯಲ್ಲಿ
ಮುಳುಗುತಿದೆ ಕನಸುಗಳ ದೋಣಿ
ನೀನಿರದ ಬಾಳಿನಲಿ
ನಾನೀಗ ಗುರಿ ಮರೆತ ಯಾನಿ
ಏಕಾಂತ ಸುಡುವಾಗ
ಏಕಾಂಗಿ ನಾನೀಗ
ನಾನಿಲ್ಲವೇ ನಿನ್ನೊಂದಿಗೆ
ಜೊತೆಯಾಗುವೆ ನಿನ ನೋವಿಗೆ
ತುಟಿಯಂಚಲಿ ಕಿರುನಗೆ ತೊಡಿಸಿ
ಕಣ್ಣಂಚಲಿ ಬೆಳಕನು ಮುಡಿಸಿ
ಬರಿದೆ ಮನದಲ್ಲಿ ಕವಿತೆಯಾ
ಬದುಕಿನಲಿ ನಗುವುದ ಕಲಿಸಿ
ಕೊನೆಗಿಷ್ಟು ಕಂಬನಿ ಉಳಿಸಿ
ಹೇಳದೆ ಮರೆಯಾಗಿ ಹೋದೆಯಾ
ಎತ್ತ ನಾ ಸಾಗುವುದು ಸುತ್ತೆಲ್ಲ ಸಾಗರದ ಬೇಲಿ
ಅತ್ತು ಗೋಳಾಡಿದರೂ ಕೇಳೋರ್ಯಾರಿಲ್ಲ ನನಗಿಲ್ಲಿ
ಏಕಾಂತ ಸುಡುವಾಗ
ಏಕಾಂಗಿ ನಾನೀಗ
ಬಾ ಸೇರಿಕೋ ಈ ತೋಳಲಿ
ಈ ಯಾತನೆ ಕೊನೆಯಾಗಲಿ
Поcмотреть все песни артиста
Другие альбомы исполнителя